Pages

Search This Blog

Showing posts with label ಕನ್ನಡ. Show all posts
Showing posts with label ಕನ್ನಡ. Show all posts

Saturday, July 31, 2010

ಡಿ.ವಿ.ಜಿ ಮತ್ತು ಮಂಕುತಿಮ್ಮನ ಕಗ್ಗ (D.V.G and Mankuthimmana Kagga)

ನಂಗೆ ನೆನಪಿರೋ ಆಗೇ ನಾನು ಕೇಳಿದ ಮೊದಲನೆ ಕಗ್ಗ ಎಸ್.ಎಸ್.ಎಲ್.ಸಿ ಅಲ್ಲಿ ಇದ್ದಾಗ ಅಂದ್ಕೊತಿನಿ ಅದು

ಸ್ಮಿಥವಿರಲಿ  ವದನದಲಿ,ಕಿವಿಗೆ  ಕೇಳಿಸದಿರಲಿ;
ಇಥವಿರಲಿ  ವಚನದಲಿರುಥವ  ಬಿಡದಿರಲಿ ;
ಮಿತವಿರಲಿ  ಮನಸಿನುದ್ವೇಗದಲ್ಲಿ ,ಬೊಗದಲಿ
ಅತಿಬೇಡವೆಲ್ಲಿಯುಂ ಮಂಕುತಿಮ್ಮ .

ಅದು ನಂಗೆ ಯಾಕ್ ಅಸ್ಟ್ ಇಷ್ಟ ಆಯ್ತು ಗೊತ್ತಿಲ್ಲ, ಅದ್ನ ಕೆಲ್ದಾಗಿಂದ ನಾನು ಡಿ.ವಿ.ಜಿ ಅವ್ರ ದೊಡ್ಡ ಅಭಿಮಾನಿ ಆಗಿದಿನಿ ಅಂದ್ರೆ ಏನ್ ತಪ್ ಆಗಲ್ಲ ಅಂದ್ಕೊತಿನಿ  , ಅವ್ರು ಬಳಸೋ ಪದಗಳೇ ಆಗೇ ಎಂತವರಿಗೂ ಇಷ್ಟ ಆಗತ್ತೆ, ಕಗ್ಗ ನಾಲ್ಕು ಸಲಿನ್ದದ್ರು ಅದ್ರಲ್ಲಿ ಅಡಗಿರೋ ಅರ್ಥ  ಮಾತ್ರ ಗಾಡವಾದದ್ದು .

ಡಿ.ವಿ.ಜ  ಅಂದ್ರೆ  ಎಲ್ಲರಿಗು  ಗೊತ್ತು  ಅಥವಾ  ಅವರ  ಬಗ್ಗೆ  ಕೇಳಿರ್ತಾರೆ  ಆದ್ರೆ  ಡಿ.ವಿ.ಜ(D .V.G) ಅಂದ್ರೆ  ಹೆಚ್ಚು  ಜನಕ್ಕೆ  ತಿಳಿದಿರೋಲ್ಲ. ಇವರ ಪೂರ್ತಿ ಹೆಸರು ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ, ಡಿ.ವಿ.ಗುಂಡಪ್ಪ (Devanahalli Venkataramanaiah Gundappa),ಇವರು ೧೨೩ ವರ್ಷ ಬಾಳಿದವರು (1887-1975) !!!!!!!,ನೊಬೆಲ್ ಪ್ರೈಸ್ ಕೊಡೋವ್ರಿಗೆ ಕನ್ನಡ ಏನಾದ್ರು ಆರ್ಥ ಆಗ್ಥಿದ್ರೆ ಇದಕೆ ನೊಬೆಲ್ ಪ್ರೈಸ್ ಸಿಗ್ತ್ಹಿತೇನೋ ಅಂತ ನಾವು ಕನ್ನಡಿಗರು ಆಶಿಸಬೇಕು ಅಸ್ಟೆ,ಇದ್ನ ಇತ್ತಿಚೆಗೆ ನಾನು ಕೇಳಿದ ಆಗೇ ಇದ್ರ ಇಂಗ್ಲಿಷ್ ವರ್ಶನ್ TIN DIN ಅಂತ ಯಾರೋ ಅನುವದಿಸ್ಥಿದರೆ ಅಂತ ಗೊತ್ತಾಗಿ ಸಂತೋಷ ಆಯ್ತು.

 ನೀವು ಬೆಂಗಳೂರ್ ನವ್ರಾದ್ರೆ ನಿಮಗೆ ಬಸವನಗುಡಿ ಅಲ್ಲಿ ಇರೋ "ಕಹಳೆ ಬಂಡೆ" ಗೊತಿರ್ಬೋದು,ಅತ್ವ "Bugle Rock" ಅಂದ್ರೆ ತಟ್ ಅಂತ ನೆನಪ್ ಆಗ್ಬೋದು ಅಲ್ವಾ,ಅಲ್ಲಿ ನೀವು ಇವರ ಪ್ರತಿಮೆನ ನೋಡಬಹುದು,ಕನ್ನಡಕ್ಕೆ ಮತ್ತಷ್ಟು ಡಿ.ವಿ.ಜಿ ಅಂತವರು ಸಿಗ್ಲಿ ಅಂತ ಆಶಿಸೋಣ,ಡಿ.ವಿ.ಜಿ ಅವ್ರ ಬಗ್ಗೆ ಇನ್ನು ಬೇಕಾದಲ್ಲಿ ಡಿ.ವಿ.ಜಿ
 

Friday, July 30, 2010

ಮಂಕುತಿಮ್ಮ ನ ಕಗ್ಗ ೭



ಚೆಲುವುನಗುಗಳ ಕಂಡವನ ಕಣ್ಣರಳುವುದು|
ಅಳುವುನೋವುಗಳ ಕಂಡೊದ್ದೆಯಾಗುವುದು||
ಇಳೆಯ ದನಿಗವನೆದೆಯೊಳೊಪ್ಪು ಮರುದನಿಯಹುದು|
ಶಿಲೆಯಲ್ಲ ಯೋಗಿಯೆದೆ-ಮಂಕುತಿಮ್ಮ||

ಮಂಕುತಿಮ್ಮ ನ ಕಗ್ಗ ೬





ಬದುಕಿಗಾರ್ ನಾಯಕರು, ಏಕನೋ ಅನೇಕರೋ? |
ವಿಧಿಯ ಪೌರುಷವೋ ಧರುಮವೊ ಅಂಧಬಲವೋ?||
ಕುದುರುವುದೆಂತು ಈಯವ್ಯವಸ್ಥೆಯ ಪಾಡು? |
ಅದಿಗುದಿಯೆ ಗತಿಯೇನೊ? - ಮಂಕುತಿಮ್ಮ ||




ಮಂಕುತಿಮ್ಮ ನ ಕಗ್ಗ ೫


ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು|
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ||
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ|
ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ||


ಮಂಕುತಿಮ್ಮನ ಕಗ್ಗ -೩




ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ |
ನಗುವ ಕೇಳುತ ನಗಿಸುವುದತಿಶಯದ ಧರ್ಮ |
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ |
ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ ||




ಮಂಕುತಿಮ್ಮನ ಕಗ್ಗ - ೨

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು | ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ ||
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ |
ಎಲ್ಲರೊಳಗೊಂದಾಗು ಮಂಕುತಿಮ್ಮ ||

Thursday, July 8, 2010

Nanu nanna kanasu (kannada)

nanu nanna kanasu a wonderful movie depicting relation between a daughter and father ,simple and straight presentation,no exaggeration anywhere,prakash raj's acting keeps you unspoken sounds so realistic,even amulya has performed her role well as daughter,ramesh arvind,rajesh has devivered strong performence in special role,Hamsaleka music,sonu nigam voice to putta putta hejje... plus point to drag you into theater,though its a remake from tamil film Abhiyum Naanum,in his debut direction prakash raj has done a great job in showing relation between daughter and father in a neat way, we will be foreseeing for such works in kannada from him


I rate 4.5/5

Monday, June 28, 2010

ಬಸವಣ್ಣನ ವಚನ

ಕಳಬೇಡ, ಕೊಲಬೇಡ - ಬಸವಣ್ಣನ ವಚನ-1

ಕಳಬೇಡ, ಕೊಲಬೇಡ,ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,ತನ್ನ ಬಣ್ಣಿಸಬೇಡ, ಇದಿರ ಹಳಿಯೇಲು ಬೇಡ
ಇದೇ ಅಂತರಂಗ ಶುದ್ದಿ,
ಇದೇ ಬಹಿರಂಗ ಶುದ್ದಿ,
ಇದೇ ನಮ್ಮ ಕೂಡಲಸಂಗಮ
ದೇವನೊಲೆಸುವ ಪರಿ.ಕೂಡಲಸಂಗಮದೇವ .

ಇನ್ನು ಬೇಕಾದಲ್ಲಿ http://chirakannada.blogspot.com/search/label/ಬಸವಣ್ಣ


ದುಂಡಿರಾಜ್ ಕವನ

ಕ್ಯಾಶ್ ಕೌಂಟರಿನ
ಹುಡುಗಿಯರ
ಮುಖದಲ್ಲಿ ನಗು
ಹುಡುಕಿದರೂ ಸಿಗದು
ಅದಕ್ಕೆ ಇರಬೇಕು
ಹಾಕಿದ್ದಾರೆ ಬೋರ್ಡು
"ನಗದು" !!!


---- ದುಂಡಿರಾಜ್ 


ಇನ್ನು ಬೇಕಾದಲ್ಲಿ

Thursday, March 26, 2009

ನನ್ನ ನೆಚ್ಚಿನ ಮಂಕುತಿಮ್ಮನ ಕಗ್ಗ



ಸ್ಮಿಥವಿರಲಿ  ವದನದಲಿ,
ಕಿವಿಗೆ  ಕೇಳಿಸದಿರಲಿ;
ಇಥವಿರಲಿ  ವಚನದಲಿ
ರುಥವ  ಬಿಡದಿರಲಿ ;
ಮಿತವಿರಲಿ  ಮನಸಿನುದ್ವೇಗದಲ್ಲಿ ,ಬೊಗದಲಿ
ಅತಿಬೇಡವೆಲ್ಲಿಯುಂ ಮಂಕುತಿಮ್ಮ .



ಇನ್ನು ಬೇಕಾದಲ್ಲಿ
http://chirakannada.blogspot.com/search/label/ಮಂಕುತಿಮ್ಮ%20ನ%20ಕಗ್ಗ